ಚಿಕ್ಕ ವಯಸ್ಸಿನಲ್ಲಿ ನಟನಾಗಬೇಕೆನ್ನುವ ಆಸೆ ಈಗ ಕೈಗೂಡಿದೆ: ಸಚಿವ ಡಾ. ಕೆ. ಸುಧಾಕರ್

ಕೊರೋನಾ ಕಾಲದಲ್ಲಿ ನೀಟ್ ಪರೀಕ್ಷೆ ಬರೆದು ವೈದ್ಯಳಾಗುವ ಕನಸು ಕಂಡಿದ್ದ ವಿದ್ಯಾರ್ಥಿನಿಯೊಬ್ಬಳ ನೈಜ ಜೀವನ ಘಟನೆ ಆಧರಿಸಿದ ’ತನುಜಾ ’ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಪತ್ರಕರ್ತ ವಿಶ್ವೇಶ್ವರ ಭಟ್ ಸಹ ಇದರಲ್ಲಿ ನಟಿಸಿದ್ದು ವಿಶೇಷ. ’ತನುಜಾ’ ಚಿತ್ರವನ್ನು ಹರೀಶ್ ಎಂ.ಡಿ. ಹಳ್ಳಿ ನಿರ್ದೇಶಿಸಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ಬಾಲ ನಟಿ ಸಪ್ತ ಪವೂರ್, ರಾಜೇಶ್ ನಟರಂಗ, ಈ ಸಿನಿಮಾದಲ್ಲಿ ನಟಿಸಿದ್ದಾರೆ.

2020ರಲ್ಲಿ ಕೊರೊನಾ ಹಾವಳಿಯಿಂದಾಗಿ ಇಡೀ ದೇಶವೇ ತತ್ತರಿಸಿ ಹೋಗಿದ್ದ ಸಮಯ. ಅಂತಹ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯ ಕುಗ್ರಾಮದ ಹುಡುಗಿ ತನುಜಾ ಬೆಂಗಳೂರಿಗೆ ಬಂದು ನೀಟ್ ಪರೀಕ್ಷೆ ಬರೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಸಚಿವ ಸುಧಾಕರ್, ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ನೆರವಿನಿಂದ ಇದು ಸಾಧ್ಯವಾಗಿತ್ತು. ಇದಕ್ಕೆ ಮುನ್ನ ವಿಶ್ವೇಶ್ವರ ಭಟ್ ತಮ್ಮ ಅಂಕಣದಲ್ಲಿ ಈ ಘಟನೆಯ ಕುರಿತು ವಿಸ್ಕೃತ ಲೇಖನ ಬರೆದಿದ್ದರು. ಇದೀಗ ಅದೇ ಘಟನೆಯನ್ನಾಧರಿಸಿ ’ತನುಜಾ’ ಚಿತ್ರ ಮೂಡಿ ಬಂದಿದ್ದು ಟ್ರೈಲರ್ ಬಿಡುಗಡೆ ಆಗಿದೆ

ಇದನ್ನೂ ನೋಡಿ: ’ತನುಜಾ’ ಚಿತ್ರದ ಟ್ರೈಲರ್

ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎನ್ನುವ ಊಹೆಯೇ ಇರಲಿಲ್ಲ

ಸಚಿವ ಡಾ. ಸುಧಾಕರ್ ಮಾತನಾಡಿ “ಡಾಕ್ಟರ್ ಆದವನನ್ನು ಆಕ್ಟರ್ ಮಾಡಿದ್ದಕ್ಕಾಗಿ ನಿರ್ದೇಶಕ ಹರೀಶ್ ಅವರಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ. ಚಿಕ್ಕ ವಯಸ್ಸಿನಲ್ಲಿ ನಾಟಕ, ಏಕಪಾತ್ರಾಭಿನಯ ಮಾಡಿದ್ದೆ, ಚಿಕ್ಕಂದಿನಲ್ಲಿ ನಟನಾಗಬೇಕೆನ್ನುವ ಕನಸಿತ್ತು. ಆದರೆ ರಾಜಕೀಯ ಸೇರಿದ ನಂತರ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎನ್ನುವ ಊಹೆಯೇ ಇರಲಿಲ್ಲ. ಚಿಕ್ಕ ವಯಸ್ಸಿನಲ್ಲಿದ್ದ ಕನಸನ್ನು ಈಗ ನನಸು ಮಾಡಿದ್ದಾರೆ. ಹರೀಶ್ ಮೊದಲು ನನ್ನ ಬಳಿ ಬಂದಾಗ ನಾನವರನ್ನು ಸೀರಿಯಸ್ ಆಗಿ ಪರಿಗಣಿಸಲಿಲ್ಲ. ಆದರೆ ಯಾವಾಗ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಹೇಳಿದರೋ ಆಗ ಗಂಭೀರವಾಗಿ ಪರಿಗಣಿಸಿದೆ. ’ತನುಜಾ’ ಸಿನಿಮಾ ಆಗಿ ಬರುತ್ತದೆ ಎನ್ನುವ ಬಗ್ಗೆ ನನಗೆ ನಿರೀಕ್ಷೆ ಇರಲಿಲ್ಲ. ಕೋವಿಡ್ ಸಮಯದಲ್ಲಿ ಸಾಕಷ್ಟು ಕುತೂಹಲ ಇರತಕ್ಕ ಘಟನೆಗಳು ನಡೆದಿದೆ. ಸರ್ಕಾರದಿಂದ ಅದರ ನಿರ್ಣಯದಿಂದ ಬಹಳಷ್ಟು ಜನರಿಗೆ ಅನುಕೂಲವಾಗಿದೆ. ಆದರೆ ಭಟ್ಟರ ಟ್ವೀಟ್ ಒಂದು ನನ್ನ ಗಮನಕ್ಕೆ ಬಂದಿದೆ. ಅದರ ಬಗ್ಗೆ ದೆಹಲಿಯ ನೀಟ್ ಪರೀಕ್ಷೆಯ ಅಧಿಕಾರಿಗಳ ಜತೆ ಮಾತನಾಡಿದ್ದೆ.

ನನಗೂ ಪಿಯುಸಿ ಆದ ಒಂದು ವರ್ಷ ಕಾಲ ಮೆಡಿಕಲ್ ಸೀಟು ಸಿಕ್ಕಿರಲಿಲ್ಲ

ನನಗೆ ತನುಜಾ ಬಗ್ಗೆ ಅವಳ ಕನಸಿನ ಬಗ್ಗೆ ಆಸಕ್ತಿ ಇತ್ತು. ಏಕೆಂದರೆ ನನಗೂ ಪಿಯುಸಿ ಆದ ಒಂದು ವರ್ಷ ಕಾಲ ಮೆಡಿಕಲ್ ಸೀಟು ಸಿಕ್ಕಿರಲಿಲ್ಲ. ಆಗ ನಾನು ತಂದೆಯವರೊಡನೆ ಹಳ್ಳಿಯಲ್ಲಿ ಕೃಷಿ ಮಾಡಿದ್ದೆ. ಆ ಒಂದು ವರ್ಷ ಹೇಗೆ ಅನುಭವ ನೀಡುತ್ತದೆ ಅದು ನನಗೆ ಅರಿವಿದೆ. ಆ ಕಾರಣ ಆಕೆಗೆ ಈ ವರ್ಷ ಪ್ರವೇಶ ಸಿಕ್ಕದಿದ್ದರೆ ಅವಳ ಮನಸ್ಥಿತಿ ಬದಲಾಗಬಹುದು. ವೈದ್ಯಳಾಗಬಹುದಾದ ಕನಸು ನನಸಾಗದೆ ಹೋಗಬಹುದು ಎಂದು ಅಧಿಕಾರಿಗಳ ಜತೆ ಸ್ವಲ್ಪ ಗಟ್ಟಿಯಾಗಿ ಮಾತನಾಡಿ ಪರೀಕ್ಷೆಗೆ ಪ್ರವೇಶ ಸಿಕ್ಕುವಂತೆ ಮಾಡಿದೆ. ಅಲ್ಲದೆ ಆ ಯುವತಿ ಶಿವಮೊಗ್ಗದ ಹಳ್ಳಿಯಿಂದ ಬರುವುದಕ್ಕೆ ಸಹ ವ್ಯವಸ್ಥೆ ಕಲ್ಪಿಸಿಕೊಟ್ಟೆವು. ಇಷ್ಟೆಲ್ಲಾ ಮಾಡಿದುದಕ್ಕೆ ಆ ಹುಡುಗಿಯೂ ಇಂದು ಅಕ್ಷರಶಃ ನಮ್ಮ ಭರವಸೆ ಇದ್ದಂತೆಯೇ ಸಾಧನೆ ಮಾಡಿದ್ದಾಳೆ. ಆಕೆಗೆ ಸರ್ಕಾರಿ ಸೀಟು ಸಿಕ್ಕಿದ್ದು ಬೆಳಗಾವಿಯಲ್ಲಿ ವ್ಯಾಸಂಗ ನಡೆಸಿದ್ದಾಳೆ. ಅಚಲವಾದ ನಂಬಿಕೆ ಇಟ್ಟುಕೊಂಡಿದ್ದರೆ ನಾವು ಸಾಧನೆ ಮಾಡಲು ದಾರಿಗಳಿವೆ ಎನ್ನಲು ತನುಜಾ ಉದಾಹರಣೆ ಆಗಿದ್ದಾಳೆ. ಈ ಸಿನಿಮಾ ನಿಜವಾದ ಸಂದೇಶ ನೀಡುವ ಸಿನಿಮಾ. ತನುಜಾ ನಿಜಜೀವನದಲ್ಲಿ ಗೆದ್ದಿದ್ದಾರೆ. ಸಿನಿಮಾವೂ ಗೆಲ್ಲಲಿ ಎಂದು ಶುಭ ಹಾರೈಸಿದರು.

ಇಲ್ಲಿ ನಟಿಸಿರುವವರೇ ನಿಜವಾದ ತನುಜಾ ಎಂದು ನಾನು ಭಾವಿಸಿದ್ದೆ!

ಇದು ಬದ್ದತೆಯನ್ನು ಒಳಗೊಂಡ ಸಿನಿಮಾ ಎಂದಿರುವ ಸುಧಾಕರ್ ಈಗಿನ ಕಾಲದಲ್ಲಿ ಸಿನಿಮಾ ಎಂದರೆ ಐದಾರು ಸಾಂಗ್, ಫೈಟಿಂಗ್ ಜತೆಗೆ ಒಂದು ಮಸಾಲಾ ಸಾಂಗ್ ಇರಬೇಕೆಂದು ಅಪೇಕ್ಷಿಸುತ್ತಾರೆ. ಆದರೆ ಹೆಣ್ಣುಮಗುವಿನ ಜೀವನ, ವಿದ್ಯೆ, ಶಿಕ್ಷಣ ಪರಿಸ್ಥಿತಿ ಮೀರಿ ಆಕೆಯ ಕನಸನ್ನು ನನಸು ಮಾಡಿಕೊಳ್ಳುವ ದಾರಿ ಇದೆಲ್ಲಾ ಈ ಸಿನಿಮಾದಲ್ಲಿ ಇದೆ. ಇದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಶಿಕ್ಷಕರಿಗೂ ನೋಡಬೇಕಾಗಿರುವ ಸಿನಿಮಾ. ನಾನು ಟ್ರೈಲರ್ ನೋಡಿದ್ದೇನೆ. ಸಿನಿಮಾ ನೋಡಿಲ್ಲ. ಆದರೆ ಇಲ್ಲಿ ನಟಿಸಿರುವವರೇ ನಿಜವಾದ ತನುಜಾ ಎಂದು ನಾನು ಭಾವಿಸಿದ್ದೆ. ಅಷ್ಟು ಹೋಲಿಕೆ ಇದೆ. ಸಪ್ತಾ ಚೆನ್ನಾಗಿ ನಟಿಸಿದ್ದಾರೆ,ಅಲ್ಲದೆ ಪಾತ್ರವನ್ನು ಜೀವಿಸಿದ್ದಾರೆ. ರಾಜೇಶ್ ನೋಡಲು ನಿಜ ಪ್ರೊಫೆಸರ್ ಕಂಡಂತೆ ಕಾಣುತ್ತಾರೆ. ಯಡಿಯೂರಪ್ಪ ಅವರೂ ನಿಜವಾದ ಘಟನೆಯಲ್ಲಿ ಹೇಗೆ ಮಾತನಾಡಿದ್ದಾರೆ ಹಾಗೇ ಅಬೀನಯಿಸಿದ್ದಾರೆ. ಇಡೀ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಕೇವಲ ಹತ್ತು ತಾಸಿನಲ್ಲಿ ನಡೆದ ಘಟನೆ

ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ ಎಲ್ಲವೂ ಒಂದು ಕನಸಿನಂತೆ ಕಾಣುತ್ತಿದೆ. ಆ ದಿನ ರಾತ್ರಿ ಸುಮಾರು ಹನ್ನೊಂದರ ವೇಳೆಗೆ ತನುಜಾ ಅವರ ತಾಯಿ ನನಗೆ ಕರೆ ಮಾಡದಿದ್ದರೆ ನಾನು ಆ ಕರೆ ಎತ್ತಿಕೊಳ್ಳದಿದ್ದರೆ, ಮರುದಿನ ನಾಣು ಟ್ವೀಟ್ ಮಾಡೈದ್ದರೆ ಟ್ವೀಟ್ ಗೆ ಸುಧಾಕರ್ ಅವರು ಶೀಘ್ರ ಸ್ಪಂದಿಸದೆ ಹೋಗಿದ್ದರೆ ನಾವಿಂದು ಇಲ್ಲಿ ಸೇರುತ್ತಿರಲೇ ಇಲ್ಲ. ಸಿನಿಮಾ ಆಗುತ್ತಿರಲಿಲ್ಲ, ತನುಜಾ ಎಂಬಿಬಿಎಸ್ ಓದುದುವುದಕ್ಕೂ ಎಡ್ಮಿಷನ್ ಸಿಕ್ಕುತ್ತಿರಲಿಲ್ಲ. ಅದೆಲ್ಲಾ ಕಾಕತಾಳೀಯ ಎಂದು ನನ್ನ ಭಾವನೆ ಎಂದು ಹೇಳಿದರು.

ಸಿನಿಮಾ ಕುರಿತ ಅವರ ಹುಚ್ಚು ಅವರಿಂದು ಇಲ್ಲಿ ನಿಲ್ಲುವಂತೆ ಮಾಡಿದೆ

ಒಂದು ರೀತಿಯಲ್ಲಿ ಇದೆಲ್ಲಾ ಒಂದು ದಿನ ಕೂಡ ಅಲ್ಲ ಕೇವಲ ಹತ್ತು ತಾಸಿನಲ್ಲಿ ನಡೆದ ಘಟನೆ. ಈ ಹತ್ತು ತಾಸಿನಲ್ಲಿ ನಡೆದ ಘಟನೆ ಒಂದಿ ಸಿನಿಂಆಗೆ ವಸ್ತು ಆಗಬಹುದು, ಅದು ಈ ರೂಪದಲ್ಲಿ ನಮಗೆ ತೋರಬಹುದು ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ನಾನು ಅದನ್ನು ಆಧರಿಸಿ ಒಂದು ಅಂಕಣ ಬರೆದಿದ್ದೆ. ಅದನ್ನು ಓದಿದ ನಿರ್ದೇಶಕ ಹರೀಶ್ ಎಂಡಿ ಹಳ್ಳಿ ನನ್ನ ಮನೆಗೆ ಬೆಂದಿದ್ದರು. ಮತ್ತು ಅನುಮತಿ ನೀಡಿದರೆ ನಿಮ್ಮ ಅಂಕಣದಲ್ಲಿನ ಘಟನೆ ಆಧರಿಸಿ ಚಿತ್ರ ಮಾಡುವುದಾಗಿ ಹೇಳಿದರು. ಅನಗೆ ಮೊದಲಿಗೆ ಇದನ್ನು ಅಷ್ಟು ಗಂಭೀರವಾಗಿ ತೀದುಕೊಳ್ಳಬೇಕೆಂದು ಕಾಣಲಿಲ್ಲ. ಆದರೆ ಕಡೆಗೆ ಅವರು ಅದನ್ನು ಸೀರಿಯಸ್ ಆಗಿ ಸಿನಿಮಾ ಮಾಡುವವರಿದ್ದಾರೆನ್ನುವದು ತಿಳಿಯಿತು. ಅವರು ನನ್ನ ಮನೆ, ಆಫೀಸಿಗೆ ಸುಮಾರು 250-300 ಬಾರಿ ಬಂದು ಹೋಗಿದ್ದಾರೆ. ಅವರ ಕೆಲಸದಲ್ಲಿನ ಶ್ರದ್ದೆ ನನಗೆ ಇಷ್ಟವಾಗಿದೆ. ಅಷ್ಟಕ್ಕೂ ಅವರು ನನ್ನ ಬಳಿ ಬಂದಾಗ ಅವರಿಗೆ ಯಾವ ನಿರ್ಮಾಪಕ ಪರಿಚಯವೂ ಇರಲಿಲ್ಲ. ಹಣ ಹೇಗೆ ಹೊಂದಿಸುವುದು ಗೊತ್ತಿರಲಿಲ್ಲ. ಆದರೆ ಸಿನಿಮಾ ಮಾಡಬೇಕೆನ್ನುವ ಅದಮ್ಯವಾದ ಒಂದು ಹುಚ್ಚಿತ್ತು. ಅದೇ ಅವರನ್ನು ಈವರೆಗೆ ಕರೆತಂದಿದೆ.

ತನುಜಾ ಎಕ್ಸಾಂ ಬರೆದಾಗ ಕೋಣೆ ಬಾಗಿಲು ಹಾಕಿಕೊಂಡು ಅತ್ತಿದ್ದೆ

ತನುಜಾ ಅಮ್ಮನನ್ನು ನೋಡಿ ನನಗಿಂದು ಕಣ್ಣೀರು ಬಂತು ಎಂದ ವಿಶ್ವೇಶ್ವರ ಭಟ್ ಅಂದು ತನುಜಾ ಎಕ್ಸಾಂ ಬರೆದಾಗಲೂ ನಾನು ನನ್ನ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಐದು ನಿಮಿಷ ಕಾಲ ನಾನು ಅತ್ತಿದ್ದಿದೆ ಎಂದು ನೆನಪಿಸಿಕೊಂಡರು. ಎಕ್ಸಾಂ ಪಾಸ್ ಆಗಿ ಅವಳಿಗೆ ಸೀಟ್ ಸಿಕ್ಕಿದಾಗಲೂ ನನಗಷ್ಟೇ ಭಾವುಕತೆ ಉಂತಾಗಿತ್ತು. ನಾನು ಇಂದು ಮೊದಲ ಬಾರಿಗೆ ತನುಜಾ ಅವರ ತಾಯಿಯನ್ನು ಮುಖಭೇಟಿಯಾಗಿದ್ದೇನೆ. ಇಂದೂ ನನಗೆ ಅದೇ ಭಾವನೆ ಉಕ್ಕಿ ಬರುತ್ತಿದೆ.

ಇನ್ನಷ್ಟು ಟೈಂ ಕೊಟ್ಟಿದ್ರೆ ಒಳ್ಳೇ ಆಕ್ಟರ್ ಆಗಬಹುದಿತ್ತು

ಒಂದು ಹಳ್ಳಿಗಾಡಿನ ಹುಡುಗಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಇದು ದೊಡ್ಡ ಸಂದೇಶ.ಚಿತ್ರವನ್ನು ಸಂಪೂರ್ಣವಾಗಿ ನೋಡಿದ್ದೇನೆ. ನಾನು, ಸುಧಾಕರ್ ಇನ್ನೂ ಒಂದಷ್ಟು ಟೈಂ ನೀಡಿದ್ದರೆ ಇನ್ನಷ್ಟು ಒಳ್ಳೆಯ ಆಕ್ಟರ್ ಆಗಿ ಕಾಣಿಸಿಕೊಳ್ಲಬಹುದಾಗಿತ್ತು ಎಂದು ಭಟ್ಟರು ಜನರಲ್ಲಿ ನಗೆ ಉಕ್ಕಿಸಿದರು. ಅಲ್ಲದೆ ಸುಧಾಕರ್ ಅವರನ್ನು ಹೊಗಳಿದ ವಿಶ್ವೇಶ್ವರ ಭಟ್ “ಅವರು (ಸುಧಾಕರ್) ಯಾವ ಕನ್ನಡ ಸಿನಿಮಾ ಹೋರೋಗಳಿಗೆ ಕಡಿಮೆ ಇಲ್ಲ” ಎಂದರು.

ಯಡಿಯೂರಪ್ಪ ಎರಡನೇ ತೇಕ್ ತೆಗೆದುಕೊಂಡೇ ಇಲ್ಲ!

ಯಡಿಯೂರಪ್ಪ ಅವರದ್ದೂ ಸಹ ಇದರಲ್ಲಿ ಉತ್ತಮ ಅಪಾತ್ರವಿದ್ದು ಅವರು ಫಸ್ಟ್ ಟೇಕ್ ಗೆ ಸರಿಯಾದ ಡೈಲಾಗ್ ಹೇಳಿದ್ದು ಎರಡನೇ ಟೇಕ್ ಆಗಿಯೇ ಇಲ್ಲ ಎನ್ನುವುದು ನನಗೆ ಅಚ್ಚರಿಯ ಸಂಗತಿ. ಅವರು ರಾಜಕೀಯ ಸಂಗತಿಯನ್ನೂ ಇಷ್ಟು ಉತ್ತಮವಾಗಿ ಮಾಡಿರಲಿಕ್ಕಿಲ್ಲ ಎಂದ ಭಟ್ಟರು ರಾಜೇಶ್ ನಟರಂಗ ಅವರ ಅಭಿನಯವನ್ನೂ ಮೆಚ್ಚಿಕೊಂಡರು.

ರಾಜ್ಯದ ಎಲ್ಲಾ ವಿದ್ಯಾರ್ಥಿಗಳೂ ಈ ಚಿತ್ರವನ್ನು ನೋಡುವ ಹಾಗೆ ಆಗಬೇಕು
ತನುಜಾ ಚಿತ್ರದಲ್ಲಿ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾಗಿರುವ ಅಂಶವು ಇದೆ ಎಂದು ವಿಶ್ವೇಶ್ವರ ಭಟ್ಟರು ಹೇಳಿದ್ದಾರೆ. ಅಲ್ಲದೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳೂ ಈ ಚಿತ್ರವನ್ನು ನೋಡುವ ಹಾಗೆ ನೀವು ಮಾಡಬೇಕೆಂದು ಸಚಿವ ಸುಧಾಕರ್ ಅವರಿಗೆ ಮನವಿ ಮಾಡಿದರು.

ಇದಲ್ಲದೆ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ನಂಜುಂಡೇ ಗೌಡರು ಸಹ ’ತನುಜಾ’ ಚಿತ್ರಕ್ಕೆ ಶುಭ ಕೋರಿದ್ದಾರೆ. ಮತ್ತು ’ಕಂಬ್ಳಿಹುಳ’ ಚಿತ್ರದ ನಾಯಕ ಅಂಜನ್ ನಾಗೇಂದ್ರ ಸಹ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

’ತನುಜಾ’ ಚಿತ್ರಕ್ಕೆ ಹರೀಶ್ ಎಂ.ಡಿ.ಹಳ್ಳಿ ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ, : ಬಿಯಾಂಡ್ ವಿಷನ್ಸ್ ಸಿನಿಮಾಸ್ ಬ್ಯಾನರ್ ನಲ್ಲಿ ಚಂದ್ರಶೇಖರಗೌಡ, ಮನೋಜ್ ಬಿ.ಜಿ : ಪ್ರಕಾಶ್ ಮದ್ದೂರು, ಅನಿಲ್ ಷಡಕ್ಷರಿ, ಗಿರೀಶ್ ಕೆ-ಗೋವರ್ಧನ್ ಬಿ, ಅವಿನಾಶ್ ಗೌಡ ರಘುನಂದನ್ ಎಸ್.ಕೆ ಈ ಚಿತ್ರ ನಿರ್ಮಿಸಿದ್ದಾರೆ. ಪ್ರದ್ದ್ಯೋತ್ತನ್ ಸಂಗೀತ, ಎಸ್ ಎಸ್ ಜಗದೀಶ್ ವಿಎಫ್ ಎಕ್ಸ್ ಚಿತ್ರಕ್ಕಿದೆ.

ಹಿಂದಿನ ಲೇಖನ

Leave a comment

Design a site like this with WordPress.com
Get started